PhonePe ಆ್ಯಪ್ ಅನ್ನು PhonePe Private Limited (ಹಿಂದಿನ ಹೆಸರು FX Mart Private Limited) ನವರು ಅಭಿವೃದ್ಧಿಪಡಿಸಿದ್ದಾರೆ. ಇದು 1956 ರ ಕಂಪನಿ ಆ್ಯಕ್ಟ್ ಪ್ರಕಾರ ಸ್ಥಾಪಿತವಾದ ಕಂಪನಿಯಾಗಿದ್ದು, ಇದರ ನೋಂದಾಯಿತ ಕಚೇರಿ.
ಕಛೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್ಪುರಿಯಾ ಸಾಫ್ಟ್‌ಝೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
PhonePe ಯಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ನಾವು ಗೌರವಿಸುತ್ತೇವೆ ಮತ್ತು ನಿಮಗೆ ಅತ್ಯುತ್ತಮ ಅನುಭವವನ್ನು ನೀಡಲು ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸುತ್ತೇವೆ. ನಮ್ಮ ಕುಂದುಕೊರತೆ ನೀತಿಯನ್ನು ನಾವು ಗ್ರಾಹಕರ ಕುಂದುಕೊರತೆಗಳನ್ನು ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವ ಹಾಗೂ ಅದೇ ಸಮಯದಲ್ಲಿ ನಮ್ಮ ಗ್ರಾಹಕರೊಂದಿಗೆ ನ್ಯಾಯಯುತವಾಗಿ ಮತ್ತು ಸೌಜನ್ಯದಿಂದ ನಡೆದುಕೊಳ್ಳುವ ದೃಷ್ಟಿಯಿಂದ ವಿನ್ಯಾಸಗೊಳಿಸಿದ್ದೇವೆ.
PhonePe ಆ್ಯಪ್ ಮೂಲಕ ವಹಿವಾಟು ನಡೆಸುವಾಗ ನಿಮಗೆ ತಡೆರಹಿತ ಅನುಭವವನ್ನು ನೀಡಲು ನಾವು ಪ್ರಯತ್ನಿಸುತ್ತೇವೆ ಮತ್ತು ಅಗತ್ಯವಿದ್ದಾಗ, ನಮ್ಮ ಆ್ಯಪ್‍ನಲ್ಲಿನ ಗ್ರಾಹಕರ ಕುಂದುಕೊರತೆಗಳ ಬೆಂಬಲ ಪ್ರಕ್ರಿಯೆಯ ಮೂಲಕ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ, ವಿವಿಧ ಮಾನವ, ನೆಟ್‌ವರ್ಕ್ ಅಥವಾ ಸಿಸ್ಟಮ್ ದೋಷಗಳಿಂದಾಗಿ, ಕೆಲವು ಸಮಸ್ಯೆಗಳಿಗೆ ಹೆಚ್ಚು ಕೇಂದ್ರೀಕೃತವಾದ ಮತ್ತು ಕಸ್ಟಮೈಸ್ ಮಾಡಿದ ಪರಿಹಾರದ ಅಗತ್ಯವಿರುತ್ತದೆ. ನೀವು ಈ ಕೆಳಗಿನ ಪರಿಹಾರ ಕಾರ್ಯವಿಧಾನವನ್ನು ಅನುಕ್ರಮವಾಗಿ ಪರಾಮರ್ಶಿಸಬಹುದು.
ಕುಂದುಕೊರತೆ ಪರಿಹಾರ
ನಿಮ್ಮ ಸಮಸ್ಯೆಗಳನ್ನು ಒಂದು ಸೂಕ್ತ ತಂಡಕ್ಕೆ ವಹಿಸಲು ಮತ್ತು ಪರಿಹರಿಸಲು, ನಾವು ಒಂದು ಎಸ್ಕಲೇಷನ್ ಮ್ಯಾಟ್ರಿಕ್ಸ್ ಅನ್ನು ನಿರ್ಮಿಸಿದ್ದೇವೆ. ನಿಮ್ಮ ಸಮಸ್ಯೆಗಳು ಸಕಾಲದಲ್ಲಿ ಪರಿಷ್ಕಾರಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಎಸ್ಕಲೇಷನ್ ಮ್ಯಾಟ್ರಿಕ್ಸ್ ಅನ್ನು ಓದಿ ಅರ್ಥ ಮಾಡಿಕೊಳ್ಳಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇವೆ.
ನಮ್ಮ ಗ್ರಾಹಕರಿಗೆ ಸ್ವ-ಸಹಾಯವನ್ನು ಒದಗಿಸುವ ನಮ್ಮ ಸಹಾಯ ಪುಟಗಳನ್ನು ಎಚ್ಚರಿಕೆಯಿಂದ ಓದಿ ಅರ್ಥ ಮಾಡಿಕೊಳ್ಳಬೇಕೆಂದು ನಾವು ನಿಮಗೆ ಶಿಫಾರಸು ಮಾಡುತ್ತೇವೆ. ನಮ್ಮ ಸಹಾಯ ಪುಟಗಳಲ್ಲಿ ಪರಿಹರಿಸಲಾಗದ ವಿಚಾರಣೆಗಳು ಮತ್ತು ಕಾಳಜಿಗಳಿಗಾಗಿ, ನೀವು ನಮ್ಮ ಗ್ರಾಹಕ ಸೇವಾ ಕೇಂದ್ರವನ್ನು ಫೋನ್, ಇಮೇಲ್ ಅಥವಾ PhonePe ಆ್ಯಪ್ ಮೂಲಕ ಸಂಪರ್ಕಿಸಬಹುದು.
ನಮ್ಮ ಇನ್-ಆ್ಯಪ್ ಬೆಂಬಲ ಚಾನೆಲ್ ಬಹುತೇಕ ಗ್ರಾಹಕ ದೂರುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಕೆಲವೊಂದು ಅಸಾಧಾರಣ ಸಂದರ್ಭದಲ್ಲಿ, ಅಂದರೆ ನಿಮ್ಮ ಸಮಸ್ಯೆಯನ್ನು ಮುಂದಿನ ಹಂತಕ್ಕೆ ಎಸ್ಕಲೇಟ್ ಮಾಡಲು ಬಯಸಿದಾಗ, ನೀವು ಈ ಹಿಂದಿನ ದೂರು ಸಲ್ಲಿಸುವ ಹಂತಗಳನ್ನು ಪೂರೈಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ನಿಮ್ಮ ಸಮಸ್ಯೆ ಅನಂತರವೂ ಬಗೆಹರಿದಿಲ್ಲ ಅಥವಾ ಪರಿಹಾರವು ನಿಮಗೆ ತೃಪ್ತಿ ನೀಡಿಲ್ಲ ಎಂದಾದಲ್ಲಿ, ಆಗ ನಿಮ್ಮ ದೂರನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ.
ಸೇವಾ ಹಂತಗಳು
ರೀಚಾರ್ಜ್ ದರ, ಬಿಲ್ ಪಾವತಿ, PhonePe ವಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು , UPI (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್), ಅಂಗಡಿಗಳು, ಹೂಡಿಕೆಗಳು, PhonePe ಸ್ಚಿಚ್ ಮತ್ತು ವೋಚರ್‌ಗಳಿಗೆ ಸೇವಾ ಹಂತಗಳು
ಹಂತ -1
- ದೂರುಗಳ ನೋಂದಣಿ:
- ನೀವು ನಿಮ್ಮ ದೂರನ್ನು PhonePe ಆ್ಯಪ್‌ನ ಹೋಂಪೇಜ್ ನಲ್ಲಿ (?) ಐಕಾನ್ ಒತ್ತುವುದರ ಮೂಲಕ PhonePe ಗ್ರಾಹಕ ಬೆಂಬಲದಲ್ಲಿ ನೋಂದಣಿ ಮಾಡಬಹುದು.
- ನಾವು ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳು ಗ್ರಾಹಕರಿಗೆ ಸೇವೆ ಒದಗಿಸುತ್ತೇವೆ.
- ದೂರುಗಳ ಪರಿಹಾರ:
- ದೂರು ಸ್ವೀಕರಿಸಿದ 24 ಗಂಟೆಗಳಲ್ಲಿ ನಿಮಗೆ ನಮ್ಮ ಮೊದಲ ಪ್ರತಿಕ್ರಿಯೆ ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಾವು 3 ವ್ಯವಹಾರದ ದಿನಗಳಲ್ಲಿ ನಿಮ್ಮ ದೂರುಗಳು/ ಪ್ರಶ್ನೆಗಳನ್ನು ಪರಿಹರಿಸುವ ಗುರಿ ಹೊಂದಿದ್ದೇವೆ.
- ನಿಮ್ಮ ದೂರಿನ ಪರಿಹಾರ ಕಾರ್ಯನಿರ್ವಹಣಾ ಅಥವಾ ತಾಂತ್ರಿಕ ಕಾರಣಗಳಿಂದ ವಿಳಂಬವಾಗಬಹುದು. ಅಂತಹ ಸನ್ನಿವೇಶದಲ್ಲಿ, ನಿಮ್ಮ ದೂರುಗಳ ಪರಿಹಾರದ ಸಮಯಾವಧಿಯನ್ನು ನಿಮಗೆ ಪೂರ್ವಭಾವಿಯಾಗಿ ಒದಗಿಸಲಾಗುತ್ತದೆ.
- ಕೆಲ ಸನ್ನಿವೇಶಗಳಲ್ಲಿ, ದೂರುಗಳ ಪರಿಹಾರ ತಕ್ಷಣವೇ ಆಗಿದ್ದರೂ, ಅದು ಸಿಸ್ಟಮ್‌ನಲ್ಲಿ ಪ್ರತಿಬಿಂಬಿಸಲು ಸ್ವಲ್ಪ ಸಮಯ ಪಡೆಯಬಹುದು. ಉದಾಹರಣೆಗೆ, ರೀಫಂಡ್ ಅನುಮೋದನೆ ತಕ್ಷಣ ನಡೆಯಬಹುದು ಆದರೆ, ನಿಮ್ಮ ಖಾತೆಯಲ್ಲಿ ಹಣ ಬಂದಿರುವುದು ಕಾಣಿಸಲು 3-10 ದಿನಗಳು ತೆಗೆದುಕೊಳ್ಳಬಹುದು. ದಯವಿಟ್ಟು ಗಮನಿಸಿ ಅಂತಹ ವಿಳಂಬಗಳಿಗೆ ಬ್ಯಾಂಕಿಂಗ್ ಅಥವಾ ಇತರ ಕಾರ್ಯನಿರ್ವಾಹಕ ಸಮಸ್ಯೆಗಳು ಹೊಣೆಯಾಗುತ್ತವೆ.
- ‘ ವಂಚನೆ ಮತ್ತು ರಿಸ್ಕ್ ವಿಶ್ಲೇಷಣೆ’ಗೆ ಸಂಬಂಧಿಸಿದ ದೂರುಗಳಲ್ಲಿ ಹಲವು ಏಜೆನ್ಸಿಗಳು ಭಾಗಿಯಾಗಿರುವುದರಿಂದ ಅದರ ತನಿಖೆಗೆ ಸಾಮಾನ್ಯವಾಗಿ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇಂತಹ ಪ್ರಕರಣಗಳಲ್ಲಿ ಅದರ ಪರಿಹಾರ ಸಮಯ, ಅದರ ಗಂಭೀರತೆ ಮತ್ತ ಕ್ಲಿಷ್ಟತೆಯನ್ನು ಅವಲಂಬಿಸಿರುತ್ತದೆ. ಇಂತಹ ಪ್ರಕರಣಗಳಲ್ಲಿ ನಿಮಗೆ ಅದರ ಸಮಯದ ಅವಧಿಯನ್ನು ಪೂರ್ವಭಾವಿಯಾಗಿ ತಿಳಿಸಲಾಗುತ್ತದೆ.
ಸೂಚನೆ: ಪರಿಹಾರದಲ್ಲಿ ಯಾವುದೇ ವಿಳಂಬವಾದಲ್ಲಿ, ಬಳಕೆದಾರರಿಗೆ ಮಾಹಿತಿ ನೀಡಲಾಗುವುದು. ಬಳಕೆದಾರರಿಗೆ ತೃಪ್ತಿಯಾಗದಿದ್ದಲ್ಲಿ ಹಂತ-2 ಕ್ಕೆ ದೂರನ್ನು ಎಸ್ಕಲೇಷನ್ ಮಾಡಲು ಅವಕಾಶವಿರುತ್ತದೆ.
ಹಂತ – 2
- ದೂರುಗಳ ನೋಂದಣಿ:
ನಿಮ್ಮ ದೂರಗಳನ್ನು ಮೇಲಿನ ಹಂತಕ್ಕೆ ಸಲ್ಲಿಸಲು ಕೆಳಗಿನ ಯಾವುದೇ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು. https://support.phonepe.com/ ನಲ್ಲಿ ದೂರು ದಾಖಲಿಸಿ
ಗ್ರಾಹಕರ ಬೆಂಬಲ ಕೇಂದ್ರಕ್ಕೆ ಕರೆ ಮಾಡಿ 080-68727374/022-68727374.
2. ದೂರುಗಳ ಪರಿಹಾರ:
ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆ ಒದಗಿಸಲು ನಾವು ಬದ್ಧರಾಗಿದ್ದೇವೆ.
ನಾವು ಎಲ್ಲ ಹಂತ 2 ರ ದೂರುಗಳನ್ನು 3 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿ ಹೊಂದಿದ್ದೇವೆ. ಪರಿಹಾರದ ಸಮಯದಲ್ಲಿ ಯಾವುದೇ ವಿಳಂಬವಿದ್ದಲ್ಲಿ ನಿಮಗೆ ಮಾಹಿತಿ ನೀಡಲಾಗುವುದು.
ಹಂತ – 3
ದೂರುಗಳ ನೋಂದಣಿ:
ನಿಮ್ಮ ಸಮಸ್ಯೆಯನ್ನು ಹಿಂದಿನ ಹಂತಗಳಲ್ಲಿ ಪರಿಹರಿಸದಿದ್ದರೆ ನೀವು ಕುಂದುಕೊರತೆ ಡೆಸ್ಕ್ ಅನ್ನು ಸಂಪರ್ಕಿಸಬಹುದು
- PhonePe ಅಲ್ಲದ QR ಗಳ ಮೂಲಕ ಪಾವತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ 30 ದಿನಗಳು
- ಯಾವುದೇ ರೀತಿಯ ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ 10 ದಿನಗಳು
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಅದರ ಅಡಿಯಲ್ಲಿ ತಯಾರಿಸಿರುವ ನಿಯಮಗಳ ಅನುಸಾರ, ಕುಂದುಕೊರತೆ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿಳಾಸಗಳನ್ನು ಕೆಳಗೆ ನೀಡಲಾಗಿದೆ:
ಸಂಪರ್ಕ:
ಪ್ರಧಾನ ನೋಡಲ್ ಅಧಿಕಾರಿ: ಸಿನು ಸುಧಾಕರ್
ನೋಡಲ್ ಅಧಿಕಾರಿ/ ಕುಂದುಕೊರತೆ ಅಧಿಕಾರಿ: ಸಿಂಚನ್ ಕುಮಾರ್ ಸಹಾ
ದೂರವಾಣಿ: 080-68727374 / 022-68727374
ವೆಬ್‌ಪುಟ: grievance.phonepe.com
ವಿಳಾಸ – ಆಫೀಸ್-2, ಮಹಡಿ 4,5,6,7, ವಿಂಗ್ ಎ, ಬ್ಲಾಕ್ ಎ, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.
2. ದೂರುಗಳ ಪರಿಹಾರ:
ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಮೊದಲ ಪ್ರತಿಕ್ರಿಯೆ ಒದಗಿಸಲು ನಾವು ಬದ್ಧರಾಗಿದ್ದೇವೆ. ನಾವು ಎಲ್ಲಾ ಹಂತ 3 ರ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿ ಹೊಂದಿದ್ದೇವೆ. ಪರಿಹಾರದ ಸಮಯದಲ್ಲಿ ಯಾವುದೇ ವಿಳಂಬದ ಕುರಿತು ನಿಮಗೆ ಮಾಹಿತಿ ನೀಡಲಾಗುವುದು.
ಹಂತ-4
ನಿಮ್ಮ ಪ್ರಶ್ನೆ ಅಥವಾ ದೂರುಗಳು ಹಿಂದಿನ ಹಂತಗಳಲ್ಲಿ 30 ದಿನಗಳ ಒಳಗೆ ತೃಪ್ತಿಕರವಾಗಿ ಪರಿಹಾರಗೊಳ್ಳದಿದ್ದಲ್ಲಿ, ನೀವು ಡಿಜಿಟಲ್ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.
ಒಂಬುಡ್ಸ್‌ಮನ್ ನ ದೂರು ದಾಖಲಿಸುವ ಪೋರ್ಟಲ್: https://cms.rbi.org.in/
ಟೋಲ್-ಫ್ರೀ ದೂರವಾಣಿ ಸಂ: 14448
ಇಮೇಲ್ ಐಡಿ: [email protected]
ವಿಳಾಸ – ಸೆಂಟ್ರಲೈಸ್ಡ್ ರಿಸೀಟ್ ಅಂಡ್ ಪ್ರಾಸೆಸಿಂಗ್ ಸೆಂಟರ್, ಭಾರತೀಯ ರಿಸರ್ವ್ ಬ್ಯಾಂಕ್, 4 ನೇ ಮಹಡಿ, ಸೆಕ್ಟರ್
17, ಚಂಡೀಗಢ – 160017
ಹೆಚ್ಚಿನ ಮಾಹಿತಿಗೆ, ದಯವಿಟ್ಟು ಈ ಲಿಂಕ್ ರೆಫರ್ ಮಾಡಿ – RBI ಒಂಬುಡ್ಸ್‌ಮನ್ .
ಗ್ರಾಹಕರ ಹೊಣೆಗಾರಿಕೆಯ ಇತಿಮಿತಿ
ಅನಧಿಕೃತ ಪಾವತಿ ವ್ಯವಹಾರದ ಕುರಿತಂತೆ ಗ್ರಾಹಕರ ಹೊಣೆಗಾರಿಕೆಗಳು ಈ ಕೆಳಗಿನವುಗಳಿಗೆ ಸೀಮಿತವಾಗಿರುತ್ತದೆ:
ಕ್ರ.ಸಂ | ಅಂಶಗಳು | ಗ್ರಾಹಕರ ಗರಿಷ್ಠ ಹೊಣೆಗಾರಿಕೆಗಳು |
---|---|---|
1 | PhonePe ನ ಕಡೆಯಿಂದ ಕೊಡುಗೆ ವಂಚನೆ/ನಿರ್ಲಕ್ಷ್ಯ/ಕೊರತೆ (ಗ್ರಾಹಕರು ವಹಿವಾಟಿನ ಕುರಿತು ದೂರು ನೀಡಿದ್ದರೂ, ನೀಡದಿದ್ದರೂ ಕೂಡ) | ಶೂನ್ಯ |
2 | ಥರ್ಡ್ ಪಾರ್ಟಿ ಉಲ್ಲಂಘನೆ, ಇದರಲ್ಲಿ ಕೊರತೆ PhonePe ಯದ್ದೂ ಅಲ್ಲ ಗ್ರಾಹಕರದ್ದೂ ಅಲ್ಲ. ಆದರೆ, ಸಿಸ್ಟಮ್‌ನಲ್ಲಿ ಇದೆ ಎಂದಾದರೆ ಮತ್ತು ಗ್ರಾಹಕರು ಅನಧಿಕೃತ ಪಾವತಿ ವಹಿವಾಟಿನ ಕುರಿತು PhonePe ಗೆ ನೋಟಿಫೈ ಮಾಡುತ್ತಾರೆ. ಇಂತಹ ಪ್ರಕರಣಗಳಲ್ಲಿ ಗ್ರಾಹಕರ ಹೊಣೆಗಾರಿಕೆ, PhonePe ಯೊಂದಿಗೆ ಗ್ರಾಹಕರ ವಹಿವಾಟಿನ ಸಂವಹನದ ರಸೀತಿ ಮತ್ತು PhonePe ಗೆ ಗ್ರಾಹಕರ ಅನಧಿಕೃತ ವಹಿವಾಟಿನ ವರದಿ ಮಾಡುವ ನಡುವಿನ ದಿನಗಳ ಸಂಖ್ಯೆಯ ಮೇಲೆ ಅವಲಂಬಿಸಿರುತ್ತದೆ- | |
i. ಮೂರು ದಿನಗಳ ಒಳಗೆ# | ಶೂನ್ಯ | |
ii. ನಾಲ್ಕರಿಂದ ಏಳು ದಿನಗಳ ಒಳಗೆ# | ವಹಿವಾಟಿನ ಮೌಲ್ಯ ಅಥವಾ ಪ್ರತಿ ವಹಿವಾಟಿಗೆ ₹10,000/- ಯಾವುದು ಕಡಿಮೆಯೋ ಅದು | |
iii. ಏಳು ದಿನಗಳಿಗೂ ಹೆಚ್ಚು# | PhonePe ಪ್ರತ್ಯೇಕ ಪ್ರಕರಣ ಆಧಾರದ ಮೇಲೆ ನಿರ್ಧರಿಸುತ್ತದೆ. | |
3 | ಗ್ರಾಹಕರ ನಿರ್ಲಕ್ಷ್ಯದಿಂದ ಉಂಟಾದ ನಷ್ಟದಂತಹ ಪ್ರಕರಣಗಳು, ಅಂದರೆ, ಅವರು ಪಾವತಿಯ ಕ್ರೆಡೆನ್ಷಿಯಲ್‌ಗಳನ್ನು ಹಂಚಿಕೊಂಡಿದ್ದಲ್ಲಿ, ಅವರು PhonePe ಅನಧಿಕೃತ ವಹಿವಾಟನ್ನು ವರದಿ ಮಾಡುವವರೆಗೆ ಉಂಟಾದ ಸಂಪೂರ್ಣ ನಷ್ಟವನ್ನು ಗ್ರಾಹಕರೇ ಭರಿಸಬೇಕು.ಅನಧಿಕೃತ ವಹಿವಾಟು ವರದಿ ಮಾಡಿದ ಮೇಲೆ ಉಂಟಾಗುವ ಯಾವುದೇ ನಷ್ಟವನ್ನು PhonePe ಭರಿಸಲಿದೆ. | |
4 | ಗ್ರಾಹಕರ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಕೂಡ ಅನಧಿಕೃತ ಎಲೆಕ್ಟ್ರಾನಿಕ್ ಪಾವತಿ ವಹಿವಾಟುಗಳಲ್ಲಿ PhonePe ತನ್ನ ವಿವೇಚನೆಯಿಂದ, ಯಾವುದೇ ಗ್ರಾಹಕರ ಹೊಣೆಗಾರಿಕೆಯನ್ನು ತೆಗೆದುಹಾಕಲು ನಿರ್ಧರಿಸಬಹುದು. |
ಸೀಮಿತ ಹೊಣೆಗಾರಿಕೆಯಲ್ಲಿ ಗ್ರಾಹಕರ ಜವಾಬ್ದಾರಿಗಳು.
- ಗ್ರಾಹಕರು ಸದೃಢ ಪಾಸ್‌ವರ್ಡ್ ಮತ್ತು ಪಿನ್‌ಗಳನ್ನು ಬಳಸಿ ತಮ್ಮ ಖಾತೆಗಳನ್ನು ಸದೃಢಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಇದನ್ನು ನಿಯಮಿತವಾಗಿ ಬದಲಾಯಿಸಬೇಕು. ಪಿನ್‌ಗಳು/ಪಾಸ್‌ವರ್ಡ್‌ಗಳು ಮತ್ತು OTP ಗಳನ್ನುPhonePe ಉದ್ಯೋಗಿಗಳು ಸೇರಿದಂತೆ ಯಾರೊಂದಿಗೂ ಇಮೇಲ್/ದೂರವಾಣಿ ಮೂಲಕ ಹಂಚಿಕೊಳ್ಳಬಾರದು. PhonePe ಎಂದಿಗೂ ಅಂತಹ ವಿವರಗಳನ್ನು ಕೇಳುವುದಿಲ್ಲ.
- ಮಾಹಿತಿಗಳನ್ನು ಅಪ್‌ಡೇಟ್ ಆಗಿರಿಸಲು ಮತ್ತು ಚಾಲ್ತಿಯಲ್ಲಿರುವ ಅಲರ್ಟ್‌ಗಳನ್ನು ಪಡೆಯಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು PhonePe ಯೊಂದಿಗೆ ನಿಯಮಿತವಾಗಿ ಅಪ್‌ಡೇಟ್ ಮಾಡಬೇಕು.
- ಎಲೆಕ್ಟ್ರಾನಿಕ್ ಪಾವತಿ ವಹಿವಾಟಿಗಾಗಿ ಗ್ರಾಹಕರು ಕಡ್ಡಾಯವಾಗಿ SMS ಅಲರ್ಟ್‌ಗಳು ಮತ್ತು ಇ-ಮೇಲ್ ಅಲರ್ಟ್‌ಗಳನ್ನು ನೋಂದಣಿ ಮಾಡಿಸಬೇಕು(ಅನ್ವಯಿಸಿದರೆ)
- ಯಾವುದೇ ಅನಧಿಕೃತ ವಹಿವಾಟನ್ನು ಗುರುತಿಸಲು ಗ್ರಾಹಕರು SMS ಅಲರ್ಟ್‌ಗಳು ಅಥವಾ ಮೊಬೈಲ್ ಆ್ಯಪ್ ಮೂಲಕ ವಹಿವಾಟುಗಳನ್ನು ನಿಯಮಿತವಾಗಿ ನಿಗಾ ವಹಿಸಬೇಕು.
- ಖಾತೆಯಲ್ಲಿನ ಯಾವುದೇ ಅನಧಿಕೃತ ವಹಿವಾಟುಗಳನ್ನು ಪ್ರಾಮಾಣಿಕವಾಗಿ PhonePe ಗೆ ವರದಿ ಮಾಡುವುದು ಗ್ರಾಹಕರ ಹೊಣೆಗಾರಿಕೆಯಾಗಿದೆ. ಈ ಮೂಲಕ ವರದಿಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
BBPS ವಿವಾದವನ್ನು ಸಲ್ಲಿಸುವುದು
BBPS ನಲ್ಲಿ ಬಿಲ್ ಪಾವತಿ ವಿವಾದವನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಈ ಲಿಂಕ್ ಮೂಲಕ ದಾಖಲಿಸಲಾದ ದೂರುಗಳನ್ನು NPCI ನೇಮಿಸಿದ ಕಾರ್ಯನಿರ್ವಹಣಾ ಘಟಕಗಳು ನಿರ್ವಹಿಸುತ್ತವೆ.
- ಈ ದೂರುಗಳನ್ನು PhonePe ಪರಿಗಣಿಸುವುದಿಲ್ಲ ಮತ್ತು ದೂರುಗಳು ಪರಿಹಾರಗೊಂಡ ನಂತರ ಯಾವುದೇ ನೋಟಿಫಿಕೇಷನ್ ಕಳುಹಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ಆಧಾರ್ ಘಟಕ ಕುಂದುಕೊರತೆ ಪರಿಹಾರ
- ಆಧಾರ್ eKYC ಮತ್ತು ಸಮ್ಮತಿ ಹಿಂತೆಗೆದುಕೊಳ್ಳುವಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ, ವ್ಯಾಪಾರಿಯು ಈ ಕೆಳಗಿನ ವಿಧಾನಗಳ ಮೂಲಕ ಸಂಪರ್ಕಿಸಬಹುದು ಅಥವಾ ದೂರು ಸಲ್ಲಿಸಬಹುದು:
- ವ್ಯಾಪಾರಿಗಳು ಇನ್‌ಬೌಂಡ್ ಬೆಂಬಲ ತಂಡವನ್ನು 080-6872-7777/ 022-6872-7777 ನಲ್ಲಿ ಸಂಪರ್ಕಿಸಬಹುದು. ನಾವು ಬೆಳಿಗ್ಗೆ 7 ರಿಂದ ಮಧ್ಯರಾತ್ರಿ 12 ರವರೆಗೆ ಬೆಂಬಲವನ್ನು ನೀಡುತ್ತೇವೆ.
- ವ್ಯಾಪಾರಿಗಳು PhonePe ಮರ್ಚೆಂಟ್ ಬೆಂಬಲದೊಂದಿಗೆ ಟಿಕೆಟ್ ಅನ್ನು ಸಲ್ಲಿಸಬಹುದು.
- ನೋಂದಾಯಿತ ಮೂಲದಿಂದ ದೂರನ್ನು ಸ್ವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಲು, ನೋಂದಾಯಿತ ಇಮೇಲ್ ಐಡಿ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ವ್ಯಾಪಾರಿ ದೃಢೀಕರಿಸುತ್ತಾರೆ. ಉದ್ಭವಿಸಿದ ಸಮಸ್ಯೆಗಳ ಪ್ರಕಾರವನ್ನು ಆಧರಿಸಿ, ಟಿಕೆಟ್ ಅನ್ನು ಆಯಾ ಆಂತರಿಕ ತಂಡಗಳಿಗೆ ನಿಗದಿಪಡಿಸಲಾಗುತ್ತದೆ, ಅವರು ನಿರ್ದಿಷ್ಟ ಸಮಯದೊಳಗೆ ಅದನ್ನು ಪರಿಹರಿಸುತ್ತಾರೆ.
- ಆನ್‌ಬೋರ್ಡಿಂಗ್ ಸಂಬಂಧಿತ ಸಮಸ್ಯೆಗಳಿಗೆ TAT ಪರಿಹರಿಸಲು 5 ಕೆಲಸದ ದಿನಗಳು ಮತ್ತು ಒಪ್ಪಿಗೆ ಹಿಂತೆಗೆದುಕೊಳ್ಳುವಿಕೆಗೆ 30 ಕ್ಯಾಲೆಂಡರ್ ದಿನಗಳು.
ವ್ಯಾಪಾರಿಗಳ ಕುಂದುಕೊರತೆ ಪರಿಹಾರ
ಆಫ್‌ಲೈನ್ ವ್ಯಾಪಾರಿಗಳಿಗೆ
ಹಂತ- 1
- ದೂರುಗಳ ನೋಂದಣಿ:
- PhonePe Business ಆ್ಯಪ್‌ನ ಮುಖಪುಟದಲ್ಲಿರುವ (?) ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು PhonePe ವ್ಯಾಪಾರಿ ಬೆಂಬಲದೊಂದಿಗೆ ನಿಮ್ಮ ದೂರನ್ನು ನೋಂದಾಯಿಸಬಹುದು.
- ಪರ್ಯಾಯವಾಗಿ, PhonePe Business ಡ್ಯಾಶ್‌ಬೋರ್ಡ್‌ನ ಮುಖಪುಟದಲ್ಲಿರುವ (?) ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ https://business.phonepe.com/faq ನಲ್ಲಿ ನೀವು ದೂರನ್ನು ನೋಂದಾಯಿಸಬಹುದು.
- ನಾವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳಲ್ಲೂ ಗ್ರಾಹಕ ಬೆಂಬಲ ಸೇವೆಯನ್ನು ನೀಡುತ್ತೇವೆ.
2. ದೂರುಗಳ ಪರಿಹಾರ:
- ದೂರನ್ನು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ನಿಮಗೆ ನಮ್ಮ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಿಮ್ಮ ಎಲ್ಲ ದೂರುಗಳು/ಪ್ರಶ್ನೆಗಳನ್ನು 7 ದಿನಗಳಲ್ಲಿ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ
- ಬ್ಯಾಂಕಿಂಗ್, ಕಾರ್ಯಾಚರಣೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ನಿಮ್ಮ ದೂರು ಪರಿಹಾರವು ವಿಳಂಬವಾಗಬಹುದು. ಅಂತಹ ಸಂದರ್ಭದಲ್ಲಿ, ನಿಮ್ಮ ದೂರನ್ನು ಪರಿಹರಿಸುವ ಕಾಲಾವಧಿಯ ಬಗ್ಗೆ ನಿಮಗೆ ಮೊದಲೇ ತಿಳಿಸಲಾಗುತ್ತದೆ.
- ಅನೇಕ ಏಜೆನ್ಸಿಗಳ ಒಳಗೊಳ್ಳುವಿಕೆಯಿಂದಾಗಿ ‘ವಂಚನೆ ಮತ್ತು ಅಪಾಯದ ಮೌಲ್ಯಮಾಪನ’ ಕ್ಕೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪರಿಹಾರದ ಸಮಯವು ಪ್ರಕರಣದ ತೀವ್ರತೆ ಮತ್ತು ಜಟಿಲತೆಯ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕಾಲಾವಧಿಯ ಬಗ್ಗೆ ನಿಮಗೆ ಮೊದಲೇ ತಿಳಿಸಲಾಗುವುದು.
ಗಮನಿಸಿ: ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಳಂಬಗಳಿದ್ದರೆ ಬಳಕೆದಾರರಿಗೆ ಮೊದಲೇ ತಿಳಿಸಲಾಗುತ್ತದೆ.
ಬಳಕೆದಾರರು ತೃಪ್ತರಾಗದಿದ್ದರೆ, 2ನೇ ಹಂತಕ್ಕೆ ದೂರುಗಳನ್ನು ಎಸ್ಕಲೇಟ್ ಮಾಡಬಹುದು.
ಹಂತ – 2
- ದೂರುಗಳ ನೋಂದಣಿ:
ನಿಮ್ಮ ದೂರನ್ನು ಎಸ್ಕಲೇಟ್ ಮಾಡಲು ನೀವು ಈ ಕೆಳಗಿನ ಚಾನೆಲ್ ಅನ್ನು ಆ್ಯಕ್ಸೆಸ್ ಮಾಡಬಹುದು. 080-6872-7777/ 022-6872-7777 ನಲ್ಲಿ ನಮ್ಮ ವ್ಯಾಪಾರಿ ಬೆಂಬಲ ಕೇಂದ್ರಕ್ಕೆ ಕರೆ ಮಾಡಿ. ನಾವು ಬೆಳಗ್ಗೆ 7 ರಿಂದ ಮಧ್ಯರಾತ್ರಿ 12 ರವರೆಗೆ ಬೆಂಬಲ ನೀಡುತ್ತೇವೆ.
2. ದೂರುಗಳ ಪರಿಹಾರ:
- ಕರೆಯಲ್ಲಿಯೇ ಮೊದಲ ಪ್ರತಿಕ್ರಿಯೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ
- 2ನೇ ಹಂತದ ಎಲ್ಲ ದೂರುಗಳನ್ನು 7 ದಿನಗಳಲ್ಲಿ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಪರಿಹಾರದ ಸಮಯದಲ್ಲಿ ಯಾವುದೇ ವಿಳಂಬವಾಗುವುದಾದರೆ ಅದನ್ನು ಮೊದಲೇ ನಿಮಗೆ ತಿಳಿಸಲಾಗುವುದು.
ಹಂತ – 3
1. ದೂರುಗಳ ನೋಂದಣಿ:
ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಿಗೆ ಅನುಸಾರವಾಗಿ, ನೋಡಲ್ ಅಧಿಕಾರಿ ಮತ್ತು ಪ್ರಧಾನ ನೋಡಲ್ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
ಸಂಪರ್ಕ:
ಪ್ರಧಾನ ನೋಡಲ್ ಅಧಿಕಾರಿ- ಸಿನು ಸುಧಾಕರ್
ನೋಡಲ್ ಅಧಿಕಾರಿ / ಕುಂದುಕೊರತೆ ಅಧಿಕಾರಿ – ಸಿಂಚನ್ ಕುಮಾರ್ ಸಹಾ
ದೂರವಾಣಿ: 080-6872-7777/ 022-6872-7777
ವೆಬ್‌ಪುಟ: https://grievance.phonepe.com/
ವಿಳಾಸ – ಕಛೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್ಪುರಿಯಾ ಸಾಫ್ಟ್‌ಝೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
ಕೆಲಸದ ಸಮಯ: ಸೋಮ-ಶುಕ್ರ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ.
2. ದೂರುಗಳ ಪರಿಹಾರ:
ದೂರನ್ನು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆ ನೀಡಲು ನಾವು ಬದ್ಧರಾಗಿದ್ದೇವೆ. 3ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪರಿಹರಿಸುವಿಕೆಯ ಸಮಯದಲ್ಲಿ ಯಾವುದೇ ವಿಳಂಬವಾಗುವುದಾದರೆ ಅದನ್ನು ಮೊದಲೇ ನಿಮಗೆ ತಿಳಿಸಲಾಗುತ್ತದೆ.
ಹಂತ – 4
ಹಿಂದಿನ ಹಂತಗಳಲ್ಲಿ ನಿಮ್ಮ ಪ್ರಶ್ನೆ ಅಥವಾ ದೂರು 30 ದಿನಗಳಲ್ಲಿ ತೃಪ್ತಿಕರವಾಗಿ ಪರಿಹಾರಗೊಳ್ಳದಿದ್ದರೆ, ನೀವು ಡಿಜಿಟಲ್ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.
ಒಂಬುಡ್ಸ್‌ಮನ್‌ನ ದೂರು ದಾಖಲು ಪೋರ್ಟಲ್: https://cms.rbi.org.in/
ಟೋಲ್-ಫ್ರೀ ದೂ. ಸಂಖ್ಯೆ: 14448
ಇಮೇಲ್ ಐಡಿ: [email protected]
ವಿಳಾಸ – ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣಾ ಕೇಂದ್ರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4 ನೇ ಮಹಡಿ, ಸೆಕ್ಟರ್ 17, ಚಂಡೀಗಢ – 160017
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಲಿಂಕ್ ಅನ್ನು ರೆಫರ್ ಮಾಡಿ – RBI Ombudsman.
ಆನ್‌ಲೈನ್ ವ್ಯಾಪಾರಿಗಳಿಗೆ
ಹಂತ- 1
- ದೂರುಗಳ ನೋಂದಣಿ:
- [email protected] ಗೆ ಬರೆಯುವ ಮೂಲಕ ನೀವು PhonePe ವ್ಯಾಪಾರಿ ಬೆಂಬಲದೊಂದಿಗೆ ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
- ನಾವು ವಾರದ ಎಲ್ಲ 7 ದಿನಗಳಲ್ಲಿ ಬೆಳಗ್ಗೆ 10 – ಸಂಜೆ 7 ವರೆಗೆ ವ್ಯಾಪಾರಿ ಬೆಂಬಲವನ್ನು ಒದಗಿಸುತ್ತೇವೆ.
- ದೂರುಗಳ ಪರಿಹಾರ:
- ದೂರನ್ನು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ನಮ್ಮ ಮೊದಲ ಪ್ರತಿಕ್ರಿಯೆಯನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಿಮ್ಮ ಎಲ್ಲ ದೂರುಗಳು/ಪ್ರಶ್ನೆಗಳನ್ನು 7 ದಿನಗಳೊಳಗೆ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ
- ಬ್ಯಾಂಕಿಂಗ್, ಕಾರ್ಯಾಚರಣೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ನಿಮ್ಮ ದೂರಿನ ಪರಿಹಾರವು ವಿಳಂಬವಾಗಬಹುದು. ಅಂತಹ ಸನ್ನಿವೇಶದಲ್ಲಿ, ನಿಮ್ಮ ದೂರಿನ ಪರಿಹಾರದ ಟೈಮ್‌ಲೈನ್‌ಗಳ ಬಗ್ಗೆ ನಿಮಗೆ ಪೂರ್ವಭಾವಿಯಾಗಿ ತಿಳಿಸಲಾಗುತ್ತದೆ.
- ಅನೇಕ ಏಜೆನ್ಸಿಗಳ ಒಳಗೊಳ್ಳುವಿಕೆಯಿಂದಾಗಿ ‘ವಂಚನೆ ಮತ್ತು ಅಪಾಯದ ಮೌಲ್ಯಮಾಪನ’ಕ್ಕೆ ಸಂಬಂಧಿಸಿದ ದೂರುಗಳ ತನಿಖೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಪರಿಹಾರದ ಸಮಯವು ಪ್ರಕರಣದ ತೀವ್ರತೆ ಮತ್ತು ಸಂಕೀರ್ಣತೆಯ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಟೈಮ್‌ಲೈನ್‌ಗಳ ಬಗ್ಗೆ ನಿಮಗೆ ಪೂರ್ವಭಾವಿಯಾಗಿ ತಿಳಿಸಲಾಗುವುದು
ಗಮನಿಸಿ: ಪರಿಹಾರದಲ್ಲಿ ಯಾವುದೇ ವಿಳಂಬಗಳಿದ್ದಲ್ಲಿ ಬಳಕೆದಾರರಿಗೆ ಪೂರ್ವಭಾವಿಯಾಗಿ ತಿಳಿಸಲಾಗುತ್ತದೆ.
ಹಂತ 2
- ದೂರುಗಳ ನೋಂದಣಿ:
ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಿಗೆ ಅನುಸಾರವಾಗಿ, ನೋಡಲ್ ಅಧಿಕಾರಿ ಮತ್ತು ಪ್ರಧಾನ ನೋಡಲ್ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
ಸಂಪರ್ಕ:
ಪ್ರಧಾನ ನೋಡಲ್ ಅಧಿಕಾರಿ- ಸಿನು ಸುಧಾಕರ್
ನೋಡಲ್ ಅಧಿಕಾರಿ / ಕುಂದುಕೊರತೆ ಅಧಿಕಾರಿ – ಸಿಂಚನ್ ಕುಮಾರ್ ಸಹಾ
ದೂರವಾಣಿ: 080-6872-7777/ 022-6872-7777
ವೆಬ್‌ಪುಟ: https://grievance.phonepe.com/
ವಿಳಾಸ – ಕಛೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
ಕೆಲಸದ ಸಮಯ: ಸೋಮ-ಶುಕ್ರ ಬೆಳಗ್ಗೆ 10 ರಿಂದ ಸಂಜೆ 7 ವರೆಗೆ. - ದೂರುಗಳ ಪರಿಹಾರ:
ದೂರನ್ನು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆ ನೀಡಲು ನಾವು ಬದ್ಧರಾಗಿದ್ದೇವೆ.
2ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪರಿಹಾರದ ಸಮಯದಲ್ಲಾಗುವ ಯಾವುದೇ ವಿಳಂಬವನ್ನು ಪೂರ್ವಭಾವಿಯಾಗಿ ನಿಮಗೆ ತಿಳಿಸಲಾಗುತ್ತದೆ.
ಹಂತ- 3
ನಿಮ್ಮ ಪ್ರಶ್ನೆ ಅಥವಾ ದೂರನ್ನು 30 ದಿನಗಳೊಳಗೆ ಹಿಂದಿನ ಹಂತಗಳಲ್ಲಿ ತೃಪ್ತಿಕರವಾಗಿ ಪರಿಹರಿಸಲಾಗದಿದ್ದರೆ, ನೀವು ಡಿಜಿಟಲ್ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.
ಒಂಬುಡ್ಸ್‌ಮನ್‌ನ ದೂರು ದಾಖಲು ಪೋರ್ಟಲ್: https://cms.rbi.org.in/
ಟೋಲ್-ಫ್ರೀ Ph. ಸಂಖ್ಯೆ: 14448
ಇಮೇಲ್ ಐಡಿ: [email protected]
ವಿಳಾಸ – ಕೇಂದ್ರೀಕೃತ ರಶೀದಿ ಮತ್ತು ಸಂಸ್ಕರಣಾ ಕೇಂದ್ರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4 ನೇ ಮಹಡಿ, ಸೆಕ್ಟರ್ 17, ಚಂಡೀಗಢ – 160017
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಅನ್ನು ರೆಫರ್ ಮಾಡಿ – RBI ಒಂಬುಡ್ಸ್‌ಮನ್.